For a better experience please change your browser to CHROME, FIREFOX, OPERA or Internet Explorer.
“In Gallery” is now crowned with it’s own Online Shopping Website.

“In Gallery” is now crowned with it’s own Online Shopping Website.

ಇನ್ ಗ್ಯಾಲರಿ – ಆಮಂತ್ರಣ ಪತ್ರಿಕೆಯ ವೆಬ್-ಸೈಟ್ ಅನಾವರಣ.

ಜಂಜಾಟದ ಬದುಕಿನ ಪ್ರಪಂಚದಲ್ಲಿ ಶುಭ ಸಮಾರಂಭಗಳ ತಯಾರಿಯನ್ನು ಸರಳವಾಗಿಸುವ  ನಿಟ್ಟಿನಲ್ಲಿ ದ.ಕದಲ್ಲಿ ಈಗಾಗಲೇ ಶೀಘ್ರವಾಗಿ ಛಾಪನ್ನು ಮೂಡಿಸಿರುವ ವಿನೂತನ ಆಮಂತ್ರಣ ಪತ್ರಿಕೆಗಳ ಮಳಿಗೆ “ಇನ್ ಗ್ಯಾಲರಿ” ತಮ್ಮ ಗ್ರಾಹಕರ ಅನುಕೂಲಕ್ಕಾಗಿ ಆನ್-ಲೈನ್ ಶಾಪಿಂಗ್ ವೆಬ್-ಸೈಟ್ (www.ingallery.in) ನ್ನು ಇಂದು ಲೋಕಾರ್ಪಣೆಗೊಳಿಸಿತು.

For English content CLICK HERE.

ಭಾರತೀಯ ಕಥೋಲಿಕ್ ಯುವ ಸಂಚಾಲನ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ವಂ| ರೊನಾಲ್ಡ್ ಡಿಸೋಜಾ ರವರು ವೆಬ್-ಸೈಟ್ ನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿರುವ ಯುವ ಪೀಳಿಗೆಯ ಮಹತ್ವವನ್ನು ತಿಳಿಸಿದರು.

ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಯುವ ಪೀಳಿಗೆಯು ಉದ್ಯಮ ಕ್ಷೇತ್ರದಲ್ಲೂ ಗಮನ ಹರಿಸಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಹೊಸ ಆವಿಷ್ಕಾರಗಳೊಂದಿಗೆ ಸಮಾಜದ ಉನ್ನತಿಗಾಗಿ ಶ್ರಮಿಸುವ ಅಗತ್ಯವಿದೆ ಎಂದು ತಿಳಿಸಿದರು ಹಾಗೂ ಸಂಸ್ಥೆಯ ಮಾಲಕರಾದ ಶ್ರೀ ಆಲ್ವಿನ್ ಡಿಸೋಜಾರವರ ಈ ಹೆಜ್ಜೆಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ  ಶ್ರೀ ಜೈಸನ್ ಪಿರೇರಾ, ಉದ್ಯಮಿಗಳಾದ ಶ್ರೀ ನೆಲ್ಸನ್ ಫ್ರ್ಯಾಂಕ್, ಶ್ರೀ ಸನೋದ್ ಲೋಬೊ ಹಾಗೂ ಶ್ರೀ ಮರ್ವಿನ್ ಡಿಸಿಲ್ವಾ, ಉಪನ್ಯಾಸಕರಾದ ಶ್ರೀ ನೆಲ್ಸನ್ ಮೋನಿಸ್ ಉಪಸ್ಥಿತರಿದ್ದರು.

ಹಲವಾರು ಸಂತೃಪ್ತ ಗ್ರಾಹಕರನ್ನು ಹೊಂದಿರುವ, ಬಿ.ಸಿ ರೋಡ್ ನ ಹೃದಯ ಭಾಗದಲ್ಲಿ ಈಗಾಗಲೇ  ಡಿಜಿಟಲ್ ಪ್ರಿಂಟಿಂಗ್ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿರುವ  ಇನ್ ಗ್ಯಾಲರಿ ಸಂಸ್ಥೆಯು ಈ ಕೆಳಗಿನ ಸೇವೆಗಳನ್ನು ನೀಡುತ್ತಿದೆ. 

  • ಎಲ್ಲಾ ಶುಭಸಮಾರಂಭಗಳಿಗಾಗಿ ವಿಶಾಲ ಶ್ರೇಣಿಯ ವಿನೂತನ ಆಮಂತ್ರಣ ಪತ್ರಿಕೆಗಳು
  • ಡಿಜಿಟಲ್ ಹಾಗೂ ಸ್ಕ್ರೀನ್  ಪ್ರಿಂಟ್ ರೀತಿಯ ಪತ್ರಿಕೆಗಳು ಇಲ್ಲಿ ಮಿತದರಗಳಲ್ಲಿ ಸೂಕ್ತ ಸಮಯದಲ್ಲಿ ದೊರೆಯುವುದು.
  • ತಮ್ಮ ಪ್ರೀತಿ ಪಾತ್ರರಿಗಾಗಿ ತಮ್ಮ ಇಷ್ಟದ ಭಾವಚಿತ್ರವನ್ನು ಅಳವಡಿಸಿ ಉಡುಗೊರೆಯಾಗಿ ನೀಡಬಹುದಾದ ಟೀ-ಶರ್ಟ್, ಜಾಕೆಟ್, ಮಗ್, ಟೀ ಕಪ್, ಗೋಡೆ ಗಡಿಯಾರ, ಬಟನ್ ಬ್ಯಾಡ್ಜ್, ಮೌಸ್ ಪ್ಯಾಡ್, ಟೈಲ್ಸ್, ಫೋಟೊ ಪ್ರೇಮ್, ಆಕ್ರೆಲಿಕ್ ಸ್ಮರಣಿಕೆ, ತಲೆದಿಂಬು ಕವರ್, ವಾಟರ್ ಬಾಟಲ್, ಪೆನ್ ಮತ್ತು ಕೀ ಚೈನ್ ಮುಂತಾದ ಉಡುಗೊರೆಗಳು ಲಭಿಸುತ್ತದೆ.

ವೆಬ್-ಸೈಟ್ ಅನಾವರಣದ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ಹೊಸ ಉತ್ಪನ್ನ ಪರಿಚಯಿಸಿದ ಶ್ರೀ ಆಲ್ವಿನ್ ಡಿಸೋಜಾರವರು, ನಮ್ಮಲ್ಲಿ ಪ್ರಿಂಟೆಡ್ ಮೊಬೈಲ್ ಕವರ್ ಉತ್ತಮ ಗುಣಮಟ್ಟದಲ್ಲಿ ದೊರಕುತ್ತವೆ ಎಂದು ತಿಳಿಸಿದರು.

ಸಂಸ್ಥೆಯ ಡಿಸೈರ್ ಗಳಾದ ಶ್ರೀ ಅಭಿಷೇಕ್ ಪಿಲಿಂಗಾಲು ಹಾಗೂ ಶ್ರೀ ಸತೀಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊ: +91 9880921097, +91 9743521097,

ವೆಬ್-ಸೈಟ್ www.ingallery.in

1 2

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts