For a better experience please change your browser to CHROME, FIREFOX, OPERA or Internet Explorer.
Twist to the Demon baby Birth Story.

Twist to the Demon baby Birth Story.

ರಕ್ಕಸ ಮಗುವಿನ ಜನನಕ್ಕೆ ಹೊಸ ತಿರುವು.

ಅಸ್ಸಾಂನಲ್ಲಿ ರಾಕ್ಷಸ ಮಗುವೊಂದು ಜನಿಸಿದೆ. 11 ತಿಂಗಳಿಗೆ ಜನಿಸಿದ ಈ ಮಗು ರಾಕ್ಷಸನಂತಿದ್ದು, ಇದು ತಾಯಿ ಕರಳನ್ನು ತಿಂದು ಆಕೆಯನ್ನು ಸಾಯಿಸಿದೆ. ಅಷ್ಟೇ ಅಲ್ಲ, ಮಗುವನ್ನು ಮುಟ್ಟಿದ ನರ್ಸ್​ ಕೂಡ ಮೃತಪಟ್ಟಿದ್ದಳು, ಎನ್ನುವ ಸುದ್ದಿ ಇತ್ತೀಚೆಗೆ ಭಾರೀ ವೈರಲ್​ ಆಗಿತ್ತು. ಆದರೆ, ಇದರ ಅಸಲಿಯತ್ತು ಮಾತ್ರ ಬೆರೆಯೇ ಇದೆ!

For ENGLISH content CLICK HERE.

‘ರಕ್ಕಸ ಮಾದರಿಯ ಮಗು ಜನನ’ ಎನ್ನುವ ಶೀರ್ಷಿಕೆಯೊಂದಿಗೆ ಇತ್ತೀಚೆಗೆ ಪತ್ರಿಕೆಯೊಂದು ವರದಿ ಮಾಡಿತ್ತು. ಈ ಸುದ್ದಿಯ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಅಲ್ಲದೆ, ವೈರಲ್​ ಆದ ವಿಡಿಯೋದಲ್ಲಿ ಮಗು ನೆಲದ ಮೇಲೆ ಮಲಗಿ ಅಳುತ್ತಿರುವ ಹಾಗೂ ಅದರ ಮೇಲೆ ನೊಣ ಹಾರುತ್ತಿರುವ ದೃಶ್ಯ ಕಂಡು ಬಂದಿತ್ತು. ಪೇಪರ್​ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಈ ಮಗು ತಾಯಿಯನ್ನೇ ಕೊಂದಿದೆ. ನಂತರ ಮಗುವಿಗೆ ಇಂಜೆಕ್ಷನ್​ ನೀಡಿ ಸಾಯಿಸಲಾಗಿತ್ತು ಎನ್ನಲಾಗಿತ್ತು.

ಆದರೆ, ಅಸಲಿ ವಿಚಾರ ಹೀಗಿಲ್ಲ. ಈ ಘಟನೆ ನಡೆದಿದ್ದು ಮೂರು ವರ್ಷಗಳ ಹಿಂದೆ, ಅಂದರೆ 2016ರಲ್ಲಿ. ಮಹಾರಾಷ್ಟ್ರದ ರೈತ ದಂಪತಿಗೆ ಈ ಮಗು ಜನಿಸಿತ್ತು. ಆದರೆ, ಪಾಪ ಈ ಮಗು ತಾಯಿ ನರ್ಸ್​​ನನ್ನು ಕೊಂದಿರಲಿಲ್ಲ. ಪೇಪರ್​ನಲ್ಲಿ ಪ್ರಕಟವಾದಂತೆ ಈ ಮಗು ರಕ್ಕಸ ಮಗು ಆಗಿರಲೇ ಇಲ್ಲ.

ಈ ಮಗು ಹುಟ್ಟುವಾಗಲೇ ಹಾರ್ಲೆಕ್ವಿನ್ ಇಚ್ಥಿಯೋಸಿಸ್ (Harlequin Ichthyosis) ಹೆಸರಿನ ಅಪರೂಪದ ಚರ್ಮ ಕಾಯಿಲೆಯಿಂದ ಬಳಲಿತ್ತು. 10 ಲಕ್ಷ ಮಂದಿಯಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಗುವಿಗೆ ಹುಟ್ಟವಾಗ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಮಗುವಿನ ಚರ್ಮ ಆರೀತಿ ಕಾಣುತ್ತಿತ್ತು. ಎರಡು ದಿನ ಮಾತ್ರ ಬದುಕಿದ್ದ ಮಗು ನಂತರ ಮೃತಪಟ್ಟಿತ್ತು.

ಚರ್ಮ ವಿಚಿತ್ರವಾಗಿ ಕಾಣುವುದೇಕೆ:

ಈ ಕಾಯಿಲೆ ಇದ್ದವರಿಗೆ ಹಳೆಯ ಚರ್ಮದ ಸೆಲ್​ಗಳು ಬೇಗ ನಶಿಸುವುದಿಲ್ಲ. ಈ ವೇಳೆ, ಹೊಸ ಚರ್ಮ ಬೇಗೆ ಉತ್ಪಾದನೆ ಆಗಿ ಬಿಡುತ್ತವೆ. ಇದರಿಂದ ಚರ್ಮ ದಪ್ಪವಾಗಿ ಕಾಣಿಸುತ್ತದೆ. ಇದೇ ರೀತಿ ಈ ಮಗುವಿಗೂ ಆಗಿದೆ. ಹೀಗಾಗಿ ನೋಡಲು ವಿಚಿತ್ರವಾಗಿ ಕಾಣಿಸಿದೆ.

ಕಾಯಿಲೆಗೆ ಮದ್ದಿಲ್ಲ:

ಈ ಕಾಯಿಲೆ ಕಾಣಿಸಿಕೊಂಡರೆ ಅದಕ್ಕೆ ಮದ್ದಿಲ್ಲ. ಆದರೆ, ಬದುಕುವ ಸಾಧ್ಯತೆ ಇದೆಯಂತೆ. ಅಮೆರಿಕದ 23 ವರ್ಷದ ಯುವತಿಗೆ ಹುಟ್ಟುವಾಗಲೇ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಆದಾಗ್ಯೂ ಈಕೆ ಬದುಕಿದ್ದಾಳೆ. ಈ ಕಾಯಿಲೆಯಿಂದ ಬಳಲುತ್ತಿರುವ ಅತಿ ಹಿರಿಯೆ ಈಕೆ.

Alt News ಮತ್ತು News 18 ಸೇರಿದಂತೆ ಹಲವಾರು ಸುದ್ದಿ ಮಾಧ್ಯಮಗಳು ಅಸಲಿಯತ್ತನ್ನು ವರದಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಂತಾಗಿದೆ.

1 2

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts