For a better experience please change your browser to CHROME, FIREFOX, OPERA or Internet Explorer.
Business Boutique Contest. A ray of hope for Businessman.

Business Boutique Contest. A ray of hope for Businessman.

ಕೊರೋನಾ ಗೆಲ್ಲಲು ಉದ್ಯಮಿಗಳಿಗೊಂದು ವಿನೂತನ ಸ್ಪರ್ಧೆ.

ಆನ್ ಲೈನ್ ಸೇವಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಛಾಪನ್ನು ಮೂಡಿಸುತ್ತಿರುವ ಉದ್ಯೋಗ ಹಾಗೂ ಉದ್ಯಮಕ್ಕೆ ಸಂಬಂಧಿಸಿದ ಸೇವೆಗಳನ್ನು ಪೂರೈಸುವ ವೆಬ್-ಸೈಟ್ Fobza.com ದಕ್ಶಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಉದ್ಯಮಿಗಳಿಗಾಗಿ ವಿನೂತನ ಸ್ಪರ್ಧೆಯನ್ನು ಏರ್ಪಡಿಸಿದೆ.

For ENGLISH content CLICK HERE.

ಉದ್ಯಮ ಆರ್ಥಿಕ ಚಟುವಟಿಕೆಗಳ ಜೀವನಾಡಿ. ಉದ್ಯೋಗಾವಕಾಶ ಸೇರಿದಂತೆ ಎಲ್ಲಾ ರೀತಿಯ ಆರ್ಥಿಕ ಹಾಗೂ ಸಾಮಾಜಿಕ ಸಮತೋಲನ ಕಾಪಾಡುವಲ್ಲಿ ಉದ್ಯಮದ ಪಾತ್ರ ಬಹುದೊಡ್ಡದು. ದೇಶದ ಆರ್ಥಿಕತೆಗೆ ಉದ್ಯಮ ಬಹುದೊಡ್ದ ವರದಾನವಾಗಿದ್ದು ಸಮಾಜಮುಖಿ ಚಿಂತನೆಯ, ಸಾಮಾಜಿಕ ಜವಾಬ್ದಾರಿಯ ಉದ್ಯಮಿಗಳಿಂದಾಗಿ ಸಮಾಜದಲ್ಲಿನ ನಿರ್ಗತಿಕರಿಗೆ, ಕಡುಬಡವರಿಗೆ ಹಾಗೂ ಎಲ್ಲಾ ವರ್ಗದ ಜನರಿಗೆ ಸಹಾಯ ಮಾಡಿದಂತ ನಿದರ್ಶನಗಳು ಹಲವು ಇವೆ. ಆದರೆ ಇಂತಹ ಉದ್ಯಮಗಳಿಗೆ ಮಹಾಮಾರಿ ಕೊರೋನಾ ನೀಡಿದ ಏಟು ಉದ್ಯಮಿಗಳನ್ನು ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಸಂಕಷ್ಟಕ್ಕೆ ತಳ್ಳಿದೆ.

ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸುತ್ತಮುತ್ತಲಿನ ಉದ್ಯಮಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಅವರ ಉದ್ಯಮಕ್ಕೆ ಹೆಚ್ಚಿನ ಪ್ರಚಾರ ನೀಡುವುದರ ಮೂಲಕ ನಮ್ಮ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ FOBZA ಸಂಸ್ಥೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಉದ್ಯಮಿಗಳಿಗಾಗಿ FOBZA Business Boutique Contest ಎಂಬ ಉದ್ಯಮ ಪ್ರಚಾರದ ಸ್ಪರ್ಧೆಯನ್ನು ಆಯೋಜಿಸಿದೆ.

ಈ ಸ್ಪರ್ಧೆಯು ಮೇ 05, 2020 ರಿಂದ ಪ್ರಾರಂಭಗೊಂಡು ಮೇ 15, 2020 ರ ವರೆಗೆ ನಡೆಯಲಿದೆ. ಸಂಸ್ಥೆಯ Instagram ಪೇಜ್ ನ ಮೂಲಕ ನಡೆಯುವ ಈ ಸ್ಪರ್ಧೆಯಲ್ಲಿ ಅತೀ ಹೆಚ್ಚು Like ಗಳಿಸಿದ ಉದ್ಯಮದ ಪೋಸ್ಟರನ್ನು ವಿಜೇತರೆಂದು ಘೋಷಿಸಲಾಗುತ್ತದೆ.

ಸ್ಪರ್ಧೆಯ ಜೊತೆಗೆ ಪ್ರತೀ ಉದ್ಯಮಕ್ಕೆ ವಿನೂತನ ರೀತಿಯಲ್ಲಿ ಪ್ರಚಾರ ನೀಡಲು ಸಹಕರಿಸುವ ಈ ಸ್ಪರ್ಧೆಯಲ್ಲಿ ಕೇವಲ ಬಹುಮಾನದ ದೃಷ್ಠಿಯಿಂದ ಪಾಲುಗೊಳ್ಳದೆ ತಮ್ಮ ಉದ್ಯಮವನ್ನು ಹೆಚ್ಚೆಚ್ಚು ಜನರಿಗೆ ಪ್ರಚಾರಗೊಳಿಸುವ ದೃಷ್ಠಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಯೋಜಕರು ಕರೆ ನೀಡಿದ್ದಾರೆ.

ಸ್ಪರ್ಧೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಕೆಳಗೆ ಸೂಚಿಸಿದ Fobza.com ನ Instagram ಹಾಗೂ Facebook Page  ಗಳಲ್ಲಿ ಕಾಣಬಹುದು.

Click here to Visit Facebook

Click here to Visit Instagram

1 2

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts